Friday 27 January 2012

ಸಾತ್ವಿಕ ಪ್ರೀತಿ

ಪ್ರೀತಿ ಎಂಬುದು ಅಸಂಖ್ಯಾತ ಭಾವನೆಗಳು ಮತ್ತು ಅನುಭವಗಳ ಪೈಕಿ ಯಾವುದಾದರೂ ಒಂದು ಭಾವವಾಗಿದ್ದು, ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಅದು ಸಂಬಂಧಿಸಿರುತ್ತದೆ. ಪ್ರೀತಿ ಎನ್ನುವ ಪದ ವಿಭಿನ್ನ ಭಾವನೆಗಳನ್ನು, ಮನೋಸ್ಥಿತಿಗಳನ್ನು ಮತ್ತು ದೃಷ್ಟಿಕೋನಗಳನ್ನು ಸೂಚಿಸುತ್ತದೆ. ಸಾರ್ವತ್ರಿಕ ಸಂತೋಷ (ಉದಾ: "ಆ ಊಟ ನನಗೆ ತುಂಬಾ ಇಷ್ಟವಾಯಿತು") ದಿಂದ ಹಿಡಿದು ಅಂತರ್‌ವ್ಯಕ್ತೀಯ ಆಕರ್ಷಣೆ (ಉದಾ: "ನಾನು ನನ್ನ ಹುಡುಗನನ್ನು ಪ್ರೀತಿಸುತ್ತೇನೆ.) ಯವರೆಗೆ ಈ ಸಮ್ಮೋಹಕ ಪದದ ಅರ್ಥ ವ್ಯಾಪಿಸಿಕೊಂಡಿದೆ.ಬಹಳ ಸಂಕೀರ್ಣ ಭಾವನೆಗಳೊಂದಿಗೆ ಸಂಯೋಜನೆಯಾಗಿರುವ ಇದರ ಅರ್ಥ ಮತ್ತು ಬಳಕೆಯಲ್ಲಿ ಸಾಕಷ್ಟು ವೈವಿಧ್ಯತೆಯಿದ್ದು, ಇದನ್ನು ಇತರೆ ಬೇರೆ ಮನೋಸ್ಥಿತಿಗೆ ಹೋಲಿಸಿದರೂ ಸಮರ್ಪಕವಾಗಿ ವ್ಯಾಖ್ಯಾನಿಸಲಾಗದಷ್ಟು ಅಸಾಮಾನ್ಯವಾಗಿದೆ.
ಒಂದು ಅಮೂರ್ತ ಪರಿಕಲ್ಪನೆಯಾಗಿರುವ ಪ್ರೀತಿ, ಬೇರೊಬ್ಬ ವ್ಯಕ್ತಿಯ ಮೇಲೆ ತೋರುವ ಸೂಕ್ಷ್ಮವಾದ ಕಾಳಜಿಯ ಆಳವಾದ ಮತ್ತು ಅನಿರ್ವಚನೀಯ ಭಾವನೆಗಳನ್ನು ಸಾಮಾನ್ಯವಾಗಿ ಸೂಚಿಸುತ್ತದೆ.ಆದರೂ, ಪ್ರಣಯ ಪ್ರೀತಿಯ ಭಾವೋದ್ರಿಕ್ತ ವಾಂಛೆ ಹಾಗೂ ಅನ್ಯೋನ್ಯತೆಯಿಂದ ಹಿಡಿದು ಕೌಟುಂಬಿಕ ಮತ್ತು ಸಾತ್ವಿಕ ಪ್ರೀತಿಯ ಲೈಂಗಿಕೇತರ ಭಾವನಾತ್ಮಕ ನಿಕಟತೆಯವರೆಗೆ ಮತ್ತು ಅಲ್ಲಿಂದ, ಧಾರ್ಮಿಕ ಪ್ರೀತಿಯ ಗಾಢ ಐಕ್ಯತೆ ಅಥವಾ ಉಪಾಸನೆಯವರೆಗಿನ ವಿವಿಧ ಭಾವನೆಗಳ ಅನುಭೂತಿಗಳ ಶ್ರೀಮಂತಿಕೆಯನ್ನು ಪ್ರೀತಿಯ ಈ ಸೀಮಿತ ಪರಿಕಲ್ಪನೆಯು ಒಳಗೊಳ್ಳುತ್ತದೆ. ತನ್ನ ವೈವಿಧ್ಯಮಯ ರೂಪಗಳಲ್ಲಿ ಅಂತರ್‌ವ್ಯಕ್ತೀಯ ಸಂಬಂಧಗಳ ಬಹುಮುಖ್ಯ ಸುಲಭಕಾರಕವಾಗಿ ವರ್ತಿಸುವ ಪ್ರೀತಿಯು ತನ್ನ ಮನಶ್ಯಾಸ್ತ್ರೀಯ ಪ್ರಾಮುಖ್ಯತೆಯ ಕಾರಣದಿಂದಾಗಿ ಸೃಜನಶೀಲ ಕಲೆಗಳಲ್ಲಿನ ಬಹಳ ಸಾಮಾನ್ಯವಾದ ವಸ್ತುಗಳಲ್ಲಿ ಒಂದಾಗಿ ನಿಂತಿದೆ.

No comments:

Post a Comment