Friday 27 January 2012

ಸಾತ್ವಿಕ ಪ್ರೀತಿ

ಪ್ರೀತಿ ಎಂಬುದು ಅಸಂಖ್ಯಾತ ಭಾವನೆಗಳು ಮತ್ತು ಅನುಭವಗಳ ಪೈಕಿ ಯಾವುದಾದರೂ ಒಂದು ಭಾವವಾಗಿದ್ದು, ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಅದು ಸಂಬಂಧಿಸಿರುತ್ತದೆ. ಪ್ರೀತಿ ಎನ್ನುವ ಪದ ವಿಭಿನ್ನ ಭಾವನೆಗಳನ್ನು, ಮನೋಸ್ಥಿತಿಗಳನ್ನು ಮತ್ತು ದೃಷ್ಟಿಕೋನಗಳನ್ನು ಸೂಚಿಸುತ್ತದೆ. ಸಾರ್ವತ್ರಿಕ ಸಂತೋಷ (ಉದಾ: "ಆ ಊಟ ನನಗೆ ತುಂಬಾ ಇಷ್ಟವಾಯಿತು") ದಿಂದ ಹಿಡಿದು ಅಂತರ್‌ವ್ಯಕ್ತೀಯ ಆಕರ್ಷಣೆ (ಉದಾ: "ನಾನು ನನ್ನ ಹುಡುಗನನ್ನು ಪ್ರೀತಿಸುತ್ತೇನೆ.) ಯವರೆಗೆ ಈ ಸಮ್ಮೋಹಕ ಪದದ ಅರ್ಥ ವ್ಯಾಪಿಸಿಕೊಂಡಿದೆ.ಬಹಳ ಸಂಕೀರ್ಣ ಭಾವನೆಗಳೊಂದಿಗೆ ಸಂಯೋಜನೆಯಾಗಿರುವ ಇದರ ಅರ್ಥ ಮತ್ತು ಬಳಕೆಯಲ್ಲಿ ಸಾಕಷ್ಟು ವೈವಿಧ್ಯತೆಯಿದ್ದು, ಇದನ್ನು ಇತರೆ ಬೇರೆ ಮನೋಸ್ಥಿತಿಗೆ ಹೋಲಿಸಿದರೂ ಸಮರ್ಪಕವಾಗಿ ವ್ಯಾಖ್ಯಾನಿಸಲಾಗದಷ್ಟು ಅಸಾಮಾನ್ಯವಾಗಿದೆ.
ಒಂದು ಅಮೂರ್ತ ಪರಿಕಲ್ಪನೆಯಾಗಿರುವ ಪ್ರೀತಿ, ಬೇರೊಬ್ಬ ವ್ಯಕ್ತಿಯ ಮೇಲೆ ತೋರುವ ಸೂಕ್ಷ್ಮವಾದ ಕಾಳಜಿಯ ಆಳವಾದ ಮತ್ತು ಅನಿರ್ವಚನೀಯ ಭಾವನೆಗಳನ್ನು ಸಾಮಾನ್ಯವಾಗಿ ಸೂಚಿಸುತ್ತದೆ.ಆದರೂ, ಪ್ರಣಯ ಪ್ರೀತಿಯ ಭಾವೋದ್ರಿಕ್ತ ವಾಂಛೆ ಹಾಗೂ ಅನ್ಯೋನ್ಯತೆಯಿಂದ ಹಿಡಿದು ಕೌಟುಂಬಿಕ ಮತ್ತು ಸಾತ್ವಿಕ ಪ್ರೀತಿಯ ಲೈಂಗಿಕೇತರ ಭಾವನಾತ್ಮಕ ನಿಕಟತೆಯವರೆಗೆ ಮತ್ತು ಅಲ್ಲಿಂದ, ಧಾರ್ಮಿಕ ಪ್ರೀತಿಯ ಗಾಢ ಐಕ್ಯತೆ ಅಥವಾ ಉಪಾಸನೆಯವರೆಗಿನ ವಿವಿಧ ಭಾವನೆಗಳ ಅನುಭೂತಿಗಳ ಶ್ರೀಮಂತಿಕೆಯನ್ನು ಪ್ರೀತಿಯ ಈ ಸೀಮಿತ ಪರಿಕಲ್ಪನೆಯು ಒಳಗೊಳ್ಳುತ್ತದೆ. ತನ್ನ ವೈವಿಧ್ಯಮಯ ರೂಪಗಳಲ್ಲಿ ಅಂತರ್‌ವ್ಯಕ್ತೀಯ ಸಂಬಂಧಗಳ ಬಹುಮುಖ್ಯ ಸುಲಭಕಾರಕವಾಗಿ ವರ್ತಿಸುವ ಪ್ರೀತಿಯು ತನ್ನ ಮನಶ್ಯಾಸ್ತ್ರೀಯ ಪ್ರಾಮುಖ್ಯತೆಯ ಕಾರಣದಿಂದಾಗಿ ಸೃಜನಶೀಲ ಕಲೆಗಳಲ್ಲಿನ ಬಹಳ ಸಾಮಾನ್ಯವಾದ ವಸ್ತುಗಳಲ್ಲಿ ಒಂದಾಗಿ ನಿಂತಿದೆ.

ವಿವಾಹ ಸಮಾರಂಭದ ಮೂಲಕ ಧರ್ಮಪ್ರಸಾರ

ಮದುವೆ ಸಮಾರಂಭದ ನಿಮಿತ್ತ ಆಪ್ತೇಷ್ಟರು, ಸ್ನೇಹಿತರ ಬಳಗ ಹೀಗೆ ಅನೇಕರೊಂದಿಗೆ ಹತ್ತಿರದ ಸಂಬಂಧ ಬರುತ್ತದೆ. ಮದುವೆ ಸಮಾರಂಭದ ಮಾಧ್ಯಮದಿಂದ ಧರ್ಮಪ್ರಸಾರ ಮಾಡಿದರೆ ಆಪ್ತೇಷ್ಟರು ಧರ್ಮಶಿಕ್ಷಿತರಾಗುವರು ಮತ್ತು ಸಾಧನೆ ಮಾಡಿ ಈಶ್ವರನೆಡೆಗೆ ಅಂದರೆ ಶಾಶ್ವತ ಆನಂದದ ಕಡೆಗೆ ಮಾರ್ಗಕ್ರಮಣ ಮಾಡುವರು. ಮದುವೆ ಸಮಾರಂಭದ ಮೂಲಕ ಧರ್ಮಪ್ರಸಾರ ಹೇಗೆ ಮಾಡಬಹುದು, ಎಂಬುದನ್ನು ತಾವು ಈ ಲೇಖನಮಾಲಿಕೆಯಿಂದ ತಿಳಿದುಕೊಳ್ಳುವವರಿದ್ದೀರಿ. ಕಳೆದ ವಾರದ ಲೇಖನದಿಂದ ವಿವಾಹ ಪತ್ರಿಕೆಯ ಬಗ್ಗೆ ತಿಳಿದುಕೊಂಡೆವು. ಈ ಲೇಖನದಿಂದ ನಾವು ಅಕ್ಷತೆ, ಮಂಗಳಸೂತ್ರ ಮತ್ತು ಪೂಜಾವಿಧಿ ಈ ವಿಷಯಗಳನ್ನು ತಿಳಿದುಕೊಳ್ಳೋಣ.

ವಿವಾಹ ಪತ್ರಿಕೆಯಲ್ಲಿ ಮುದ್ರಿಸಲು ವಿವಾಹ  ವಿಧಿ
 
 
ಮದುವೆಯಲ್ಲಿ ಅಕ್ಷತೆ ಉಪಯೋಗಿಸುವ ಕಾರಣ
ಮದುವೆಯಲ್ಲಿ ಅಕ್ಷತೆಯನ್ನು ವಧು- ವರರ ತಲೆಯ ಮೇಲೆ ಹಾಕುವುದು ದೇವತೆಗಳ ಕೃಪಾಧಾರೆಯ ಪ್ರತೀಕ ವಾಗಿದೆ. ಮದುವೆ ವಿಧಿಯಲ್ಲಿ ಉಪ ಯೋಗಿಸುವ ಅಕ್ಷತೆಗೆ ಕುಂಕುಮ ಹಚ್ಚಿರು ತ್ತಾರೆ. ಕೆಂಪು ಕುಂಕುಮದ ಕಡೆಗೆ ಬ್ರಹ್ಮಾಂಡ ದಲ್ಲಿನ ಆದಿಶಕ್ತಿಯ ತತ್ತ್ವ ಆಕರ್ಷಿತವಾಗು ತ್ತದೆ. ಆದಿಶಕ್ತಿಯ ತತ್ತ್ವವು ಆಕರ್ಷಿತವಾಗಿ ರುವ ಅಕ್ಷತೆಯನ್ನು ವಧು-ವರರ ತಲೆಯ ಮೇಲೆ ಹಾಕುವುದರಿಂದ ವಧು-ವರ ರಲ್ಲಿನ ದೈವತ್ವ ಜಾಗೃತವಾಗಿ ಅವರಲ್ಲಿ ಸಾತ್ತ್ವಿಕತೆ ಹೆಚ್ಚಾಗಿ ಸಹಜವಾಗಿ ಮದುವೆಯ ವಿಧಿಯ ಸ್ಥಳದಲ್ಲಿ ಬಂದಿರುವ ದೇವ- ದೇವತೆಗಳ ಲಹರಿಗಳನ್ನು ಆಕರ್ಷಿಸುವ ಅವರ ಕ್ಷಮತೆ ಹೆಚ್ಚಾಗುತ್ತದೆ. ಅದರಿಂದ ಇಂತಹ ದೇವ-ದೇವತೆಗಳು ಉಪಸ್ಥಿತ ರಿರುವ ಈ ಸಮಾರಂಭದಿಂದ ವಧು- ವರರಿಗೆ ಲಾಭ ದೊರೆಯುತ್ತದೆ.
 
ಮಂಗಳಸೂತ್ರದಲ್ಲಿನ ಕಪ್ಪು ಮಣಿ ಮತ್ತು ಬಟ್ಟಲು ಇವುಗಳ ಆಧ್ಯಾತ್ಮಿಕ ಅರ್ಥ
ಮಂಗಳಸೂತ್ರದ ಎರಡು ಬಟ್ಟಲು ಗಳಲ್ಲಿ ಒಂದು ಬಟ್ಟಲು ಶಿವನದಾದರೆ ಇನ್ನೊಂದು ಬಟ್ಟಲು ಶಕ್ತಿಯ ಪ್ರತೀಕ ವಾಗಿದೆ. ಶಿವ-ಶಕ್ತಿಯ ಬಲದ ಮೇಲೆ ವಧುವಿಗೆ ಮಾವನ ಮನೆಯವರ ರಕ್ಷಣೆ ಮತ್ತು ಅವರನ್ನು ಕಾಪಾಡುವುದಿ ರುತ್ತದೆ. ಈ ಎರಡು ಬಟ್ಟಲನ್ನು ಜೋಡಿಸುವ ತಂತಿಯು ತವರು ಮನೆಯ ಕುಲದೇವತೆಯ ಉಪಾಸನೆ ಬಿಟ್ಟು ಈಗ ಮಾವನ ಮನೆಯ ಕುಲದೇವಿಯ ಉಪಾಸನೆ ಮಾಡಲು ಹಿಂದೂ ಧರ್ಮವು ನೀಡಿದ ಅನುಮತಿಯಲ್ಲಿನ ಕೊಡು-ಕೊಳ್ಳುವುದರ ದರ್ಶಕವಾಗಿದೆ. ತವರುಮನೆಯ ಬಟ್ಟಲಿನಲ್ಲಿ ಅರಶಿಣವಾದರೆ ಮಾವನ ಮನೆಯ ಬಟ್ಟಲಿನಲ್ಲಿ ಕುಂಕುಮ ತುಂಬಿ, ಕುಲದೇವಿಯನ್ನು ಸ್ಮರಿಸಿ ಮಂಗಳಸೂತ್ರದ ಪೂಜೆ ಮಾಡಿ ಅನಂತರವೇ ಅದನ್ನು ಕುತ್ತಿಗೆಗೆ ಕಟ್ಟಲಾಗುತ್ತದೆ.
ಪೂಜಾವಿಧಿ ಮಾಡುವಾಗ ಪತ್ನಿಯು ಪತಿಯ ಬಲಬದಿಗೆ ಏಕೆ ಕುಳಿತುಕೊಳ್ಳಬೇಕು?
ಪತ್ನಿಗೆ ಗಂಡನ ಅರ್ಧಾಂಗಿನಿ ಅಂದರೆ ಬಲನಾಡಿ ಎಂದು ತಿಳಿದುಕೊಳ್ಳುತ್ತಾರೆ. ಶಿವನ ಶಕ್ತಿಯೆಂದು ಪತ್ನಿಯು ಪತಿಯ ಬಲಬದಿಗೆ ಇದ್ದು ಅವನಿಗೆ ಪ್ರತಿಯೊಂದು ಕರ್ಮದಲ್ಲಿಯೂ ಸಹಕಾರ ಮಾಡುವುದಿರುತ್ತದೆ. ಪ್ರತಿ ಯೊಂದು ಪೂಜಾವಿಧಿಯಲ್ಲಿ ಪತ್ನಿ ಕೇವಲ ಪತಿಯ ಬಲ ಕೈಗೆ ತನ್ನ ನಾಲ್ಕು ಬೆರಳು ಗಳನ್ನು ಸ್ಪರ್ಶಿಸಿ ಅವನಿಗೆ ಪೂಜಾವಿಧಿಯಲ್ಲಿ ಬೇಕಾದ ಶ್ರೀ ದುರ್ಗಾದೇವಿಯ ಶಕ್ತಿಯನ್ನು ಪೂರೈಸುತ್ತಾಳೆ. ಆದುದರಿಂದ ಯಜಮಾನ ಮತ್ತು ಅವನ ಪತ್ನಿ ಇವರು ಮಾಡಿದ ಕರ್ಮಕ್ಕೆ ಶಿವ-ಶಕ್ತಿಯ ಸಹಾಯ ದೊರೆತು ಕಡಿಮೆ ಕಾಲಾವಧಿಯಲ್ಲಿ ಫಲ ಪ್ರಾಪ್ತಿಯಾಗುತ್ತದೆ. ಕೇವಲ ಯಜ್ಞಕರ್ಮ ದಲ್ಲಿ ಪತ್ನಿಯು ಯಜಮಾನನ ಎಡಬದಿಗೆ ಕುಳಿತುಕೊಳ್ಳಬೇಕು. (ಹೆಚ್ಚಿನ ಮಾಹಿತಿಗಾಗಿ ಓದಿ - ಸನಾತನದ ಗ್ರಂಥಮಾಲಿಕೆ ‘ಧರ್ಮಶಾಸ್ತ್ರ ಹೀಗೇಕೆ ಹೇಳುತ್ತದೆ’?)
 ವಿವಾಹಪತ್ರಿಕೆ ಸಾತ್ತ್ವಿಕವಾಗಲು ಏನು ಮಾಡಬೇಕು?
ವಿವಾಹಪತ್ರಿಕೆಯು ಸದ್ಯ ಪ್ರತಿಷ್ಠೆಯ ವಿಷಯವಾಗಿದೆ. ಅನೇಕ ಪುಟಗಳ, ಸುಗಂಧಭರಿತ, ದುಬಾರಿ ಮದುವೆಯ ಪತ್ರಿಕೆ ಮುದ್ರಿಸಲು ಸಮಾಜವು ಪ್ರಯತ್ನಿಸು ತ್ತಿದೆ. ‘ವಿವಾಹ’ವು ಧಾರ್ಮಿಕ ವಿಧಿಯಾಗಿ ರುವುದರಿಂದ ವಿವಾಹಪತ್ರಿಕೆಗಳು ಸಾತ್ತ್ವಿಕ ವಾಗಿರಬೇಕು ಮತ್ತು ಅದರ ಮೂಲಕ ಧರ್ಮಪ್ರಸಾರವಾಗಬೇಕು ಎಂಬುದಕ್ಕಾಗಿ ಪ್ರಯತ್ನಿಸಬೇಕು. ಈ ದೃಷ್ಟಿಯಿಂದ ವಿವಾಹ ಪತ್ರಿಕೆಯಲ್ಲಿನ ವಿವಿಧ ಘಟಕ ಹೇಗಿರ ಬೇಕು, ಎಂಬುದನ್ನು ಮುಂದೆ ನೀಡಲಾಗಿದೆ.
ಸಾತ್ತ್ವಿಕ ಚಿತ್ರಗಳು ಮತ್ತು ಕಲಾಕುಸುರಿ
ಪತ್ರಿಕೆಯಲ್ಲಿ ದೇವತೆಗಳ ವಿಡಂಬನಾತ್ಮಕ ಚಿತ್ರಗಳನ್ನು (ಉದಾ. ಶ್ರೀ ಗಣೇಶನ ಕೇವಲ ಮುಖವಿರುವ, ಎಲೆಯಲ್ಲಿ ಬಿಡಿಸಿದ, ಪೇಠಾ ಕಟ್ಟಿದ ಇತ್ಯಾದಿ) ಮುದ್ರಿಸಬೇಡಿ. ದೇವತೆ ಗಳ ಸಾತ್ತ್ವಿಕ ಚಿತ್ರಗಳನ್ನು (ಉದಾ. ಮೂರ್ತಿ ಶಾಸ್ತ್ರಕ್ಕನುಸಾರ ತಯಾರಿಸಿದ ಪೂರ್ಣಾಕೃತಿ ಶ್ರೀ ಗಣೇಶಮೂರ್ತಿ) ಉಪಯೋಗಿಸಿ. ಪತ್ರಿಕೆಯಲ್ಲಿ ಲೇಖನ ಸಂರಚನೆ ಮಾಡು ವಾಗ ಶುಭಚಿಹ್ನೆಯನ್ನು (ಉದಾ. ಸ್ವಸ್ತಿಕ, ಓಂ, ಕಲಶ, ಕಮಲ) ಉಪಯೋಗಿಸಿ.
ಲೇಖನ
ಪತ್ರಿಕೆಯಲ್ಲಿನ ಲೇಖನವನ್ನು ಮಾತೃ ಭಾಷೆಯಲ್ಲಿ ಪ್ರಕಟಿಸಿರಿ. ಮಾತೃಭಾಷೆ ಯಲ್ಲಿನ ಲೇಖನವು ಎಲ್ಲ ಆಪ್ತೇಷ್ಟರಿಗೆ ತಿಳಿಯದಿದ್ದರೆ ಅದನ್ನು ರಾಷ್ಟ್ರೀಯ ಭಾಷೆ ಯಲ್ಲಿ ಪ್ರಕಟಿಸಿ; ಆದರೆ ಅದನ್ನು ಆಂಗ್ಲ ದಿಂದ ಪ್ರಕಟಿಸಬೇಡಿ. ಪತ್ರಿಕೆಯಲ್ಲಿನ ಲೇಖನದ ವ್ಯಾಕರಣ ಶುದ್ಧವಾಗಿರಬೇಕು ಹಾಗೂ ಲೇಖನದಲ್ಲಿ ವಿದೇಶಿಭಾಷೆಯ ಶಬ್ದಗಳನ್ನು ಉಪಯೋಗಿಸಬೇಡಿ. ಅಕ್ಷರ ಗಳು ವರ್ತುಲಾಕಾರ ಮತ್ತು ಎದ್ದು ಕಾಣು ವಷ್ಟು ಸ್ಪಷ್ಟವಾಗಿರಬೇಕು; ಆದರೆ ಅಕ್ಷರ ಗಳು ಮಸುಕಾಗಿರಬಾರದು. ಅಕ್ಷರಗಳನ್ನು ಡೊಂಕಾಗಿ ಬರೆಯಬಾರದು. ಆಮಂತ್ರಣದ ವಿಷಯ ಸಾಮಾನ್ಯವಾಗಿ ಗುರು ಮತ್ತು ಈಶ್ವರನ ಬಗ್ಗೆ ಭಾವ ವ್ಯಕ್ತವಾಗುವಂತಿರ ಬೇಕು, ಉದಾ. ‘ನಮ್ಮ ಕುಲದೇವತೆ ಶ್ರೀ ಭವಾನಿದೇವಿಯ ಕೃಪೆಯಿಂದ .....’, ‘ಶ್ರೀ ಗುರು ಪ.ಪೂ.ಭಕ್ತರಾಜ ಮಹಾರಾಜರ ಕೃಪೆಯಿಂದ.....’ ಹೀಗೆ ಆಮಂತ್ರಣವನ್ನು ಪ್ರಾರಂಭಿಸಬೇಕು.

ಮಾಂಗಲ್ಯಧಾರಣೆ

ಇದನ್ನು ಸಂಸ್ಕೃತದಲ್ಲಿ ಮಾಂಗಲ್ಯತಂತು ಎಂದೂ ಹೇಳು ತ್ತಾರೆ. ಇದರಲ್ಲಿ ಎರಡು ಎಳೆಗಳುಳ್ಳ ದಾರದಲ್ಲಿ ಕಪ್ಪು ಮಣಿಗಳನ್ನು ಪೋಣಿಸಿರುತ್ತಾರೆ. ಮಧ್ಯಭಾಗದಲ್ಲಿ ನಾಲ್ಕು ಚಿಕ್ಕ ಮಣಿಗಳು ಹಾಗೂ ೨ ಚಿಕ್ಕ ಬಟ್ಟಲುಗಳಿರುತ್ತವೆ. ಎರಡು ದಾರಗಳೆಂದರೆ ಪತಿ-ಪತ್ನಿಯರ ಬಂಧನ, ೨ ಬಟ್ಟಲುಗಳೆಂದರೆ ಪತಿ-ಪತ್ನಿ ಮತ್ತು ನಾಲ್ಕು ಕಪ್ಪು ಮಣಿ ಗಳೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಾಗಿವೆ. ವರನ ಪಕ್ಷದ ಸುಮಂಗಲಿಯರು ವಧು-ವರರನ್ನು ಪೂರ್ವಾಭಿಮುಖವಾಗಿ ಕುಳ್ಳಿರಿಸಬೇಕು. ವಧುವಿಗೆ ಅಷ್ಟಪುತ್ರಿ ಎನ್ನುವ ಹೆಸರಿನ ಎರಡು ಹಳದಿ ಬಣ್ಣದ ವಸ್ತ್ರಗಳನ್ನು ಮತ್ತು ರವಿಕೆ ಹಾಗೂ ಕಪ್ಪು ಮಣಿಗಳ ಮಾಂಗಲ್ಯವನ್ನು ಕೊಡಬೇಕು. ಅಷ್ಟಪುತ್ರಿಗಳ ಪೈಕಿ ಒಂದನ್ನು ಉಟ್ಟುಕೊಂಡು, ಒಂದನ್ನು ಅಂಗವಸ್ತ್ರವೆಂದು ಹೊದ್ದುಕೊಳ್ಳಬೇಕು. ರವಿಕೆ ಯನ್ನು ಹಾಕಿಕೊಳ್ಳಬೇಕು. ನಂತರ ವರನು ಮಾಂಗಲ್ಯವನ್ನು ಕನ್ಯೆಯ ಕೊರಳಿಗೆ ಕಟ್ಟಬೇಕು. ಭಾವಾರ್ಥ: ‘ಹಿಂದೂ ಧರ್ಮದಲ್ಲಿ ಪತಿಯು ಪತ್ನಿಗೆ ‘ಮಂಗಲಸೂತ್ರವನ್ನು ಕಟ್ಟುವುದು’ ಎಂದರೆ, ಅವರು ಪರಸ್ಪರರನ್ನು ಸಾಧನೆಯ ಬಂಧನದಲ್ಲಿ ಸಿಲುಕಿಸುವುದು. ‘ಶಿವ’ ಮತ್ತು ‘ಶಕ್ತಿ’ ಒಟ್ಟಿಗೆ ಸಮಾಜದಲ್ಲಿ ಸೇರಿ ಧರ್ಮಕಾರ್ಯ ಮಾಡುವುದು ಇದರ ಭಾವಾರ್ಥ ವಾಗಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಿಷಯವನ್ನು ಸಮಷ್ಟಿ ಕಾರ್ಯದ ಮಹತ್ವವನ್ನು ಅರಿತುಕೊಂಡೇ ಹೇಳಲಾಗಿದೆ.

ಹಿಂದೂ ಮದುವೆ

ಹಿಂದೂ ಮದುವೆ ಯು ಇಬ್ಬರು ಸೂಕ್ತ, ಸಮರಸದ ವ್ಯಕ್ತಿಗಳನ್ನು ಒಟ್ಟಿಗೆ ತರುವ ಪ್ರಕ್ರಿಯೆಯೇ ವಿವಾಹವೆನಿಸಿದೆ. ಹಿಂದೂ ಮದುವೆಯ ಸಮಾರಂಭಗಳು ಸಾಂಪ್ರದಾಯಿಕವಾಗಿ ಕನಿಷ್ಠಪಕ್ಷ ಭಾಗಶಃ ಸಂಸ್ಕೃತದಲ್ಲಿ ನೆರವೇರಿಸಲ್ಪಡುತ್ತವೆ.ಬಹುತೇಕ ಹಿಂದೂ ಸಮಾರಂಭಗಳಲ್ಲಿ ಈ ಭಾಷೆಯು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಸ್ಥಳೀಯ ಜನರ ಭಾಷೆಯನ್ನೂ ಸಹ ಬಳಸಲಾಗುತ್ತಿದ್ದು,ಬಹಳಷ್ಟು ಹಿಂದೂಗಳು ಸಂಸ್ಕೃತವನ್ನು ಅಷ್ಟಾಗಿ ಅರ್ಥ ಮಾಡಿಕೊಳ್ಳಲು ಸಮರ್ಥರಾಗಿರುವುದಿಲ್ಲ. ಅವರಲ್ಲಿ ಹಲವು ಧಾರ್ಮಿಕ ಕ್ರಿಯೆಗಳಿವೆ,ಸಾಂಪ್ರದಾಯಿಕ ಕಾಲದಿಂದಲೂ ಅವು ನಡೆದುಕೊಂಡು ಬರುತ್ತಿವೆ,ಅದಲ್ಲದೇ ಹಲವಾರು ಆಧುನಿಕ ಪಾಶ್ಚಿಮಾತ್ಯ ಮದುವೆ ಸಮಾರಂಭಗಳಿಗಿಂತ ಭಿನ್ನವಾಗಿರುತ್ತವೆ.ಈ ಮದುವೆಯ ಶಿಷ್ಟಾಚಾರ ಸಂಪ್ರದಾಯಗಳು ವಿವಿಧ ಪ್ರದೇಶ,ಕುಟುಂಬಗಳು ಮತ್ತು ಜಾತಿಗಳು ಇಂತಹವುಗಳ ಮೇಲೆ ಅವಲಂಬಿಸುತ್ತಿರುತ್ತವೆ.ಉದಾಹರಣೆಗೆ ರಜಪೂತ್ ಮದುವೆಗಳು ಮತ್ತು ಐಯ್ಯರ್ ಮದುವೆಗಳು ಹೀಗೆ ವಿಂಗಡಿಸಲ್ಪಡುತ್ತವೆ. ಹಿಂದೂಗಳು ಈ ಮದುವೆಗಳ ಸಂಬಂಧಕ್ಕೆ ಬಹಳಷ್ಟು ಮಹತ್ವ ನೀಡುತ್ತಾರೆ.ಮದುವೆಯ ಸಮಾರಂಭಗಳು ರಂಗುರಂಗಿನಿಂದಲ್ಲದೇ ಅದ್ದೂರಿಯಿಂದ ಕೂಡಿರುತ್ತವೆ.ಅದಲ್ಲದೇ ಈ ಸಮಾರಂಭಗಳು ಹಲವು ದಿನಗಳ ವರೆಗೂ ನಡೆಯುತ್ತವೆ.

       ಬಹುಸಂಖ್ಯಾತ ಹಿಂದೂಗಳು ವಾಸಿಸುವ ಭಾರತದಲ್ಲಿ ಆಯಾ ಧರ್ಮಗಳಿಗೆ ಸಂಬಂಧಿಸಿದಂತೆ ವಿವಾಹ ಕಾನೂನುಗಳು ವಿಭಿನ್ನವಾಗಿರುತ್ತವೆ. ಆಗ ೧೯೫೫ ರಲ್ಲಿ ಭಾರತದ ಸಂಸತ್ತಿನಲ್ಲಿ ಪಾಸಾದ ಹಿಂದೂ ಮ್ಯಾರೇಜ್ ಆಕ್ಟ್ ೧ ರ ಪ್ರಕಾರ ಎಲ್ಲಾ ಕಾನೂನು ಉದ್ದೇಶಗಳಿಗೆ ಎಲ್ಲ ಜಾತಿ,ಮತ ಅಥವಾ ಪಂಥ,ಸಿಖ್ಖ,ಬೌದ್ಧರು ಮತ್ತು ಜೈನ್ ಧರ್ಮದವರನ್ನು ಈ ಹಿಂದೂ ಮ್ಯಾರೇಜ್ ಆಕ್ಟ್ ನಡಿ ಒಂದೇ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಸ್ಪೆಷಿಯಲ್ ಮ್ಯಾರೇಜ್ ಆಕ್ಟ್,೧೯೫೪ ರ ಪ್ರಕಾರ ಹಿಂದೂ ಅಲ್ಲದ ಯಾರನ್ನಾದರೂ ಓರ್ವ ಹಿಂದೂ ವಿವಾಹವಾಗಬಹುದು.ಕಾನೂನು ನಿಗದಿಪಡಿಸಿದ ಷರತ್ತುಗಳನ್ನು ಅನುಸರಿಸಿ ಅಗತ್ಯ ಶಿಷ್ಟಾಚಾರ ಪಾಲಿಸಿ ಈ ವಿವಾಹ ಊರ್ಜಿತಗೊಳಿಸಬಹುದು.
ಮದುವೆ-ಪೂರ್ವದ ಸಮಾರಂಭಗಳೆಂದರೆ ನಿಶ್ಚಿತಾರ್ಥ (ಇದು ವಾಗ್ದಾನ ಒಳಗೊಂಡಿರುತ್ತದೆ,ಅಥವಾ ಮೌಖಿಕ ಒಪ್ಪಂದ ಮತ್ತು ಲಗ್ನ-ಪತ್ರ ,ಲಿಖಿತ ಘೋಷಣೆ)ಅಲ್ಲದೇ ವರನ ಕಡೆಯವರು ವಧುವಿನ ಮನೆಗೆ ವರಾತ ಬರುವುದು;ಸಾಮಾನ್ಯವಾಗಿ ಶಾಸ್ತ್ರೋಕ್ತ ಮೆರವಣಿಗೆ ಮೂಲಕ ಬರುತ್ತಾರೆ. ಮದುವೆ-ನಂತರದ ಸಮಾರಂಭಗಳಲ್ಲಿ ವಧುವನ್ನು ಆಕೆಯ ಹೊಸಮನೆಗೆ ಸ್ವಾಗತಿಸುವುದೂ ಒಂದಾಗಿದೆ.
ಆಧುನಿಕ ಯುಗದಲ್ಲಿಯೂ ಹಿಂದೂ ಧರ್ಮವು ಪವಿತ್ರವಾದ ಪುರಾಣಗಳಲ್ಲಿ ಉಲ್ಲೇಖಿತವಾದಂತೆ ದೇವರುಗಳ ಪೂಜಾ ಪದ್ಧತಿಗಳ ಮೇಲೆ ಬಹಳಷ್ಟು ಅವಲಂಬಿತವಾಗಿದೆ.ಹಿಂದೂ ಧರ್ಮದಲ್ಲಿನ ವಿವಾಹಪದ್ಧತಿಯಲ್ಲಿ ವೇದದ ಒಳಗಿರುವ ಯಜ್ಞ ದ ಪ್ರಕಾರವು ಅಗ್ರಸ್ಥಾನದಲ್ಲಿದೆ.(ಒಂದು ಪ್ರಕಾರದ ಅಗ್ನಿ-ತ್ಯಾಗ) ಈ ಅಗ್ನಿಪೂಜೆಯೊಂದಿಗೆ ಇಂಡೊ-ಆರ್ಯನ್ ಪದ್ಧತಿಯಲ್ಲಿ ಆರ್ಯರ ದೇವತೆಗಳನ್ನು ಪ್ರಾರ್ಥನೆ ಮೂಲಕ ಆಹ್ವಾನಿಸಲಾಗುತ್ತದೆ. ಇದು ಮೂಲದಲ್ಲಿ ಪುರಾತನವಾದ ಈ ಸಮಾರಂಭಗಳು ಸ್ನೇಹ/ಸಂಬಂಧಗಳನ್ನು ಗಹನವಾಗಿ ಬಂಧಿಸಿಡುವಲ್ಲಿ ಸಫಲವಾಗಿವೆ.(ಅದಲ್ಲದೇ ಪೌರಾಣಿಕ ಪಠ್ಯಗಳಲ್ಲಿ ಕಾಣುವುದೇನೆಂದರೆ ಒಂದೇ ಲಿಂಗದ ಅಥವಾ ವಿಭಿನ್ನ ಲಿಂಗದ ಜನರನ್ನು ಒಟ್ಟಿಗೆ ತರುವುದೇ ಇಂತಹ ಸಮಾರಂಭಗಳ ಗಹನವಾದ ಉದ್ದೇಶವಾಗಿದೆ.)ಇಂದೂ ಕೂಡಾ ಈ ಸಾಂಪ್ರದಾಯಿಕತೆಯ ಗಾಢತೆಯು ಮದುವೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಹಿಂದೂ ಮದುವೆಗಳ ಪ್ರಮುಖ ಸಾಕ್ಷಿ ಎಂದರೆ ಅಗ್ನಿ-ದೇವ (ಅಥವಾ ಪವಿತ್ರ ಅಗ್ನಿ) ಅಗ್ನಿ ,ಯಾವುದೇ ಕಾನೂನು ಮತ್ತು ಸಂಪ್ರದಾಯಗಳನ್ನು ಅನುಸರಿಸಿದರೂ ಈ ಪವಿತ್ರ ಅಗ್ನಿಸಾಕ್ಷಿ ಇಲ್ಲದೇ ಮದುವೆಯ ಪ್ರಕ್ರಿಯೆ ಪೂರ್ಣವಾಗದು.ವಧು ಮತ್ತು ವರರಿಬ್ಬರೂ ಈ ಪವಿತ್ರ ಅಗ್ನಿ ಸುತ್ತಲೂ ಏಳು ಸುತ್ತು ಸುತ್ತಿ ತಮ್ಮ ಪವಿತ್ರ ಸಂಬಂಧಕ್ಕೆ ಕಾರಣರಾಗುತ್ತಾರೆ.

ವೈವಾಹಿಕ ಬದುಕಿನ ಮೂಲಾಧಾರವನ್ನು ಗಟ್ಟಿಗೊಳಿಸಿ ಪೂರ್ಣಗೊಳಿಸುವ ರೂಢಿಗಳು

ಓರ್ವ ವೇದಕಾಲದ ಋಷಿ ಹೇಳುವಂತೆ ಸಂತಸ ಮತ್ತು ಸಂತೃಪ್ತಿಯ ವೈವಾಹಿಕ ಜೀವನವೆಂದರೆ ಭಾವನಾತ್ಮಕವಾಗಿ ಒಂದುಗೂಡುವಿಕೆ,ಅನ್ಯೋನ್ಯತೆ ಮತ್ತು ಪತಿ,ಪತ್ನಿಯರ ನಡುವಿನ ಪ್ರೀತಿಯ ಸಂಬಂಧವೆಂಬುದಾಗಿದೆ. ಹೀಗೆ ಮದುವೆಯೆಂದರೆ ಸ್ವಯಂ-ತೃಪ್ತಿಪಡುವಿಕೆಯಲ್ಲ;ಇದು ಜೀವನದುದ್ದಕೂ ಸಾಮಾಜಿಕ ಮತ್ತು ದೈವಿಕ ಜವಾಬ್ದಾರಿಯನ್ನು ನೆರವೇರಿಸುವಂತಹದ್ದಾಗಿದೆ. ವೈವಾಹಿಕ ಜೀವನವೆಂದರೆ ಇಬ್ಬರು ಒಂದಾಗುವ ಅವಕಾಶದೊಂದಿಗೆ ಜೀವನದುದ್ದಕ್ಕೂ ಆತ್ಮ ಸಂಗಾತಿಗಳಾಗಿರುವುದು.

ಪ್ರಧಾನ ಧಾರ್ಮಿಕ ಆಚರಣೆಗಳು

ಎಲ್ಲಾ ಧಾರ್ಮಿಕ ಆಚರಣೆಗಳು ಕುಟುಂಬದ ಸಂಪ್ರದಾಯಗಳ ಮೇಲೆ ನಿರ್ಧಾರವಾಗುತ್ತವೆ. ಕೆಲವು ಸಾಂಪ್ರದಾಯಿಕ ಆಚರಣೆಗಳು ವಿಭಿನ್ನ ಪ್ರದೇಶಗಳಲ್ಲಿ ಕೊಂಚ ವ್ಯತ್ಯಾಸ ಹೊಂದಿರುತ್ತವೆ.

ಮದುವೆಯ ಸಂದರ್ಭದ ಸಂಭ್ರಮಾಚರಣೆಗಳು

ಸಪ್ತಪದಿ

ಸಪ್ತಪದಿ ಎಂದರೆ (ಸಂಸ್ಕೃತದಲ್ಲಿ ಏಳು ಮೆಟ್ಟಿಲುಗಳು/ಹೆಜ್ಜೆಗಳು , c.f.(ಒಟ್ಟುಗೂಡಿಸುವಿಕೆ) ನ ಆಡುಭಾಷಾ ಸೂತ್ರದಲ್ಲಿ ಅದು ರಕ್ತ ಸಂಬಂಧಗಳಿಗೆ ಸಂಬಂಧಿಸಿದ್ದಾಗಿದೆ; ಸಪ್ತಮ +ಪಾದಗಳು ) ಅಥವಾ ಇನ್ನೊಂದೆಂದರೆ ಸಾಥ್ ಫೆಯೆರಾಸ್ ಎಂಬ ಪದಗಳು ಹಿಂದೂ ವಿವಾಹಗಳ ಬಗ್ಗೆ ವೇದಗಳ ಕಾಲದಿಂದಲೂ ಆಚರಣೆಗೆ ಬಂದ ಅತ್ಯಂತ ಮಹತ್ವದ ಅಂಗವೆನಿಸಿವೆ. ವಿವಾಹಿತ ಜೋಡಿಯು ಪವಿತ್ರ ಅಗ್ನಿಯ ಮಂಡಲದ ಸುತ್ತಲೂ ಏಳು ಬಾರಿ ಸುತ್ತು ಹಾಕುತ್ತದೆ.ಈ (ಅಗ್ನಿ ),ಅವರಿಬ್ಬರೂ ಒಬ್ಬರಿಗೊಬ್ಬರು ಬದ್ಧರಾಗುವ ವಚನಗಳಿಗಾಗಿ ಮಾಡಿದ ಪ್ರಮಾಣಕ್ಕೆ ಅದು ಸಾಕ್ಷಿಯಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ವಧು ಮತ್ತು ವರ, ಇವರ ನಡುವೆ ಕೊಂಡಿಯಾಗಿ ಬಟ್ಟೆಯೊಂದರ ಗಂಟೊಂದನ್ನು ಸಾಂಕೇತಿಕವಾಗಿ ಹಾಕಿ ಈ ಸಮಾರಂಭದಲ್ಲಿ ಜೋಡಿಸಲಾಗುತ್ತದೆ. ಎಲ್ಲಾ ಕಡೆಗೂ ಅಥವಾ ಬೇರೆಡೆಗೆ ಹೋಗುವಾಗ ವರನು ವಧುವಿನ ಬಲಗೈಯನ್ನು ತನ್ನ ಬಲಗೈಯಲ್ಲಿ ಹಿಡಿದಿರುತ್ತಾನೆ. ಪ್ರತಿಯೊಂದು ಸುತ್ತುವಿಕೆಯು ಆಯಾ ಸಮುದಾಯ ಮತ್ತು ಪ್ರದೇಶಗಲ್ಲಿನ ವಧುವರರ ಸಂಬಂಧದಂತೆ ನಡೆಯುತ್ತದೆ. ಮೊದಲ ಸುತ್ತಿನಲ್ಲಿ ಸಾಮಾನ್ಯವಾಗಿ ವಧುವೇ ವರನನ್ನು ಕೊಂಡೊಯ್ಯುತ್ತಾಳೆ. ಉತ್ತರ ಭಾರತದಲ್ಲಿ ಮೊದಲ ಆರು ಸುತ್ತುಗಳನ್ನು ವಧುವೇ ಮುಂದಾಗಿ ನಡೆಯುವುದು ಸಾಮಾನ್ಯವಾಗಿದೆ.ಕೊನೆಯ ಸುತ್ತು ಮಾತ್ರ ವರನು ಮುಂದಾಗುತ್ತಾನೆ. ಭಾರತದ ಮಧ್ಯ ಭಾಗಗಳಲ್ಲಿ ಮೊದಲ ಮೂರು ಅಥವಾ ನಾಲ್ಕು ಸುತ್ತುಗಳನ್ನು ವಧುವೇ ಮುನ್ನಡೆಸುತ್ತಾಳೆ. ಪ್ರತಿಯೊಂದು ಸುತ್ತಿಗೂ ದಂಪತಿ ಜೋಡಿಯು ಒಂದೊಂದು ವಚನದ ಬದ್ಧತೆಯನ್ನು ತೋರಿಸುತ್ತದೆ.ಸಂತಸದ ಸಂಬಂಧ ಮತ್ತು ಗೃಹ ಜವಾಬ್ದಾರಿ ಬಗೆಗೆ ಉತ್ತಮ ಕೊಂಡಿಯನ್ನು ಜೋಡಿಸುತ್ತದೆ.
  • ಪುರೋಹಿತರು ಆಯಾ ಜೋಡಿಗೆ ಮಂತ್ರ ಘೋಷಣೆ ಮಾಡುತ್ತಾರೆ.ಅದೇ ರೀತಿ ವರನು ವಧುವಿಗೆ ಅದನ್ನು ಪುನರುಚ್ಚರಿಸುತ್ತಾನೆ.
  • ವಧುವಿನ ಕಡೆಯ ಹೆಣ್ಣುಮಗಳೊಬ್ಬಳು ಅಭಿವೃದ್ಧಿಯ ಸಂಕೇತವಾಗಿ ಇಬ್ಬರ ಸಮೃದ್ಧಿಗಾಗಿ ಸಸಿಯೊಂದನ್ನು ಹೊತ್ತು ಮುನ್ನಡೆಯುತ್ತಾಳೆ.
  • ವಧು ಅಥವಾ ವರನಿಗೆ ಮಕ್ಕಳಿದ್ದರೆ ಅವರು ಈ ಸಮಾರಂಭದ ಭಾಗವಾಗಲಾರರು.ಅಂದರೆ ಮರುಮದುವೆಯ ಕಾಲದಲ್ಲಿ ಮಕ್ಕಳ ಅಸ್ತಿತ್ವ ಇಲ್ಲಿ ಬರಲಾರದು.
  • ವಧುವಿಗೆ ಸುಗಂಧ ಪರಿಮಳ ಸಿಂಪಡಿಸಿ ಉದಾಹರಣೆಗೆ ಗುಲಾಬಿ ಪಕಳೆಗಳ ಪರಿಮಳ ಇತ್ಯಾದಿ ವಧುಗೆ ಸಂತಸಪಡಿಸಲು ಬಳಸಲಾಗುತ್ತದೆ.
ದಕ್ಷಿಣ ಭಾರತದಲ್ಲಿ ಪುರೋಹಿತರು ಹೇಳುವ ಪ್ರತಿ ಮಂತ್ರವನ್ನು ಜೋಡಿಯು ಪುನರುಚ್ಚರಿಸುತ್ತದೆ:
"ನಾವೀಗ ಒಟ್ಟಾಗಿ ಈ ಪ್ರಮಾಣ ಮಾಡೋಣ. ನಾವು ಪ್ರೀತಿ,ಆಹಾರ,ನಮ್ಮ ಬಲ ಮತ್ತು ಸಮ ರುಚಿಯನ್ನು ಒಟ್ಟಾಗಿ ಸಮನಾಗಿ ಹೊಂದೋಣ. ನಮ್ಮಿಬ್ಬರ ಮನಸ್ಸು ಒಂದೇ ಇರಲಿ,ನಮ್ಮ ಪ್ರತಿಜ್ಞೆಯನ್ನು ನಾವು ಒಟ್ಟಾಗಿ ನೆರವೇರಿಸೋಣ. ನಾನು ಸಾಮವೇದ, ನೀನು ಋಗ್ವೇದ, ನಾನು ಮೇಲಿನ ಲೋಕವಾದರೆ, ನೀನು ಭೂಮಿ; ನಾನು ಸುಖಿಲಾಮ್, ನೀನು ಅದನ್ನು ಹೊಂದಿದಾಕೆ - ಒಂದಾಗಿ ಹೊಂದಾಣಿಕೆಯಿಂದ ಒಟ್ಟಾಗಿರೋಣ ಮತ್ತು ಮಕ್ಕಳನ್ನು ಪಡೆಯೋಣ ಅದಲ್ಲದೇ ಇನ್ನುಳಿದ ಸಂಪತ್ತಿಗೂ ಪಾಲುದಾರರಾಗೋಣ; ಬಾ ಜೊತೆಗೆ ಸಾಗೋಣ ಓ ನನ್ನ ಸುಂದರಿಯೇ ನನ್ನೊಡನೆ ಬಾ.
"ನಾವು ಸಪ್ತಪದಿ ತುಳಿದಿದ್ದೇವೆ. ನೀನು ಯಾವಾಗಲೂ ನನ್ನವಳಾಗಿರು. ಹೌದು.ನಾವಿಬ್ಬರೂ ಈಗ ಬದುಕಿನಲ್ಲಿ ಪಾಲುದಾರರು. ನಾನು ನಿನ್ನವಳಾಗಿದ್ದೇನೆ. ಇದರ ನಂತರ,ನೀನಿಲ್ಲದೇ ನಾನು ಬದುಕಲು ಸಾಧ್ಯವಿಲ್ಲ. ನಾನಿಲ್ಲದೇ ಬದುಕಬೇಡ. ಸಂತಸಗಳನ್ನು ಒಟ್ಟಿಗೆ ಹಂಚಿಕೊಳ್ಳೋಣ. ನಾವಿಬ್ಬರೂ ಶಬ್ದಾರ್ಥ, ಒಟ್ಟಾಗಿ ಇರುತ್ತೇವೆ. ನೀನೆ ವಿಚಾರಸರಣಿ ಮತ್ತು ನಾನು ಅದರ ಸ್ಪಷ್ಟತೆಯಾಗಿರುವೆ. ರಾತ್ರಿಯು ನಮಗೆ ಜೇನಿನ- ಸಿಹಿಯಾಗಲಿ. ಈ ಮುಂಜಾವು ನಮಗೆ ಜೇನಿನ- ಸಿಹಿಯಾಗಲಿ. ಈ ಭೂಮಿ ನಮಗೆ ಜೇನಿನ- ಸಿಹಿಯಾಗಲಿ. ಈ ಸ್ವರ್ಗಗಳು ನಮಗೆ ಜೇನಿನ- ಸಿಹಿಯಾಗಲಿ. ಈ ಸಸ್ಯರಾಶಿಯು ನಮಗೆ ಜೇನಿನ- ಸಿಹಿಯಾಗಲಿ. ಈ ಸೂರ್ಯನು ನಮಗೆ ಜೇನಿನ- ಸಿಹಿಯಾಗಲಿ. ಈ ಹಸುಗಳ ಹಾಲು ನಮಗೆ ಜೇನಿನ- ಸಿಹಿಯಾಗಲಿ. ಈ ಸ್ವರ್ಗವು ಸ್ಥಿರವಾಗಿದ್ದು,ಈ ಭೂಮಿ ಸ್ಥಿರವಾಗಿದ್ದು,ಈ ಪರ್ವತಗಳು ಸ್ಥಿರವಾಗಿದ್ದು ಹೀಗೆ ನಮ್ಮ ಸಂಬಂಧವು ಸದಾ ಕಾಲ ಶಾಶ್ವತ ಸ್ಥಿತವಾಗಿರಲಿ.

ಹೂ ಹಾಸಿಗೆ ಸಮಾರಂಭ

ಈ ಹೂ ಹಾಸಿಗೆ ಉತ್ಸವದಲ್ಲಿ ವಧು ಹೂವಿನ ಅಲಂಕಾರದೊಂದಿಗೆ ತುಂಬಿಹೋಗಿರುತ್ತಾಳೆ.ಮದುವೆಯ ಅನಂತರ ಹಾಸಿಗೆ, ಕೋಣೆಗಳನ್ನು ವರನ ಕುಟುಂಬದವರು ಹೂವಿನ ರಾಶಿಯಿಂದ ಅಲಂಕರಿಸುತ್ತಾರೆ. ಇದು ಇಷ್ಟಾರ್ಥ ಪೂರೈಕೆಯ ಹಕ್ಕು ಎಂದೂ ಹೇಳಲಾಗುತ್ತದೆ. ಈ ಮನೋಭಿಲಾಷೆ ಪೂರೈಕೆಯು ಒಂದು ರಾತ್ರಿಯ ಶುಭ ಸಂದರ್ಭದಲ್ಲಿ ನಡೆಯುತ್ತದೆ.

ವಿವಾಹ ವಿಧಿ

ವಿವಾಹ ಪತ್ರಿಕೆಯಲ್ಲಿ ಮುದ್ರಿಸಲು ವಿವಾಹ ವಿಧಿಯ ವಿಷಯದಲ್ಲಿ ಧರ್ಮಶಿಕ್ಷಣ ನೀಡುವ ಲೇಖನ
                            ಮಂಟಪದೇವತೆ ಪ್ರತಿಷ್ಠಾಪನೆ
ವಿವಾಹ, ಉಪನಯನ ಇತ್ಯಾದಿ ಸಂಸ್ಕಾರಗಳ ಆರಂಭದಲ್ಲಿ ಈ ಸಂಸ್ಕಾರವನ್ನು ನಿರ್ವಿಘ್ನವಾಗಿ ಪೂರ್ಣಗೊಳಿಸಬೇಕೆನ್ನುವ ಉದ್ದೇಶದಿಂದ ಮಂಟಪದೇವತೆ ಮತ್ತು ಅವಿಘ್ನಗಣಪತಿಯ ಪ್ರತಿಷ್ಠಾಪನೆ ಮಾಡುವ ಪದ್ಧತಿಯಿದೆ; ಇದಕ್ಕೆ ದೇವರನ್ನು ಕೂಡಿಸುವುದು  ಎಂದು ಹೇಳುತ್ತಾರೆ. 
 ಮಂಗಲಾಷ್ಟಕ ಮತ್ತು ಅಕ್ಷತಾರೋಪಣ ವಿಧಿ


ಮಂಗಲಾಷ್ಟಕ ಪೂರ್ಣವಾದ ನಂತರ ಅಂತರಪಟ ಉತ್ತರ ದಿಕ್ಕಿನಿಂದ ತೆಗೆಯಬೇಕು. ಅನಂತರ ವಧು-ವರರು ಕೈಯಲ್ಲಿರುವ ಅಕ್ಷತೆ, ಬೆಲ್ಲ, ಜೀರಿಗೆ ಇತ್ಯಾದಿಗಳನ್ನು ಪರಸ್ಪರರ ತಲೆಯ ಮೇಲೆ ಹಾಕುತ್ತಾರೆ. ಮೊದಲು ವಧು ವರನಿಗೆ ಮತ್ತು ನಂತರ ವರ ವಧುವಿಗೆ ಮಾಲೆ ಹಾಕುತ್ತಾರೆ.
ಕನ್ಯಾದಾನ
ವಧುವನ್ನು ವರನಿಗೆ ದಾನ ನೀಡುವುದಕ್ಕೆ ಕನ್ಯಾದಾನ ಎಂದು ಹೇಳುತ್ತಾರೆ. ‘ಈ ಕನ್ಯೆಯು ಬ್ರಹ್ಮಲೋಕವನ್ನು ಪ್ರಾಪ್ತಿ ಮಾಡಿಕೊಳ್ಳ ಬೇಕೆಂಬ ಇಚ್ಛೆಯಿಂದ ನೀವು ವಿಷ್ಣುವೆಂದು ತಿಳಿದು ನೀಡುತ್ತಿ ದ್ದೇನೆ’, ಎಂದು ವಧುವಿನ ತಂದೆ ಹೇಳುತ್ತಾರೆ.
 


 ಮಂಗಳಸೂತ್ರ ಬಂಧನ
ಮಂಗಳಸೂತ್ರದಲ್ಲಿ ಎರಡೆಳೆ ದಾರದಲ್ಲಿ ಕಪ್ಪು ಮಣಿಗಳನ್ನು ಪೋಣಿಸಿರಲಾಗುತ್ತವೆ. ಮಧ್ಯದಲ್ಲಿ ೪ ಚಿಕ್ಕ ಮಣಿಗಳು ಮತ್ತು ೨ ಸಣ್ಣ ತಾಳಿ(ಬಟ್ಟಲು)ಗಳಿರುತ್ತವೆ. ಎರಡು ದಾರಗಳು ಅಂದರೆ ಪತಿ-ಪತ್ನಿಯರ ಬಂಧನ, ಎರಡು ಬಟ್ಟಲುಗಳೆಂದರೆ ಪತಿ-ಪತ್ನಿ ಹಾಗೂ ೪ಕಪ್ಪು ಮಣಿಗಳೆಂದರೆ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳು. 

 ವಿವಾಹ ಹೋಮ
ವಧುವಿನಲ್ಲಿ ಭಾರ್ಯತ್ವ ಸಿದ್ಧವಾಗಲು ಮತ್ತು ಗೃಹ್ಯಾಗ್ನಿಯು ಸಿದ್ಧವಾಗಲು ವಿವಾಹಹೋಮ ಮಾಡುತ್ತಾರೆ. 
 ಪಾಣಿಗ್ರಹಣ ಮತ್ತು ಲಾಜಾಹೋಮ
ವರನು ತನ್ನ ಐದು ಬೆರಳುಗಳ ಸಹಿತ ವಧುವಿನ ಅಂಗೈಯನ್ನು ತನ್ನ ಕೈಯಲ್ಲಿ ಹಿಡಿಯುವುದು, ಇದಕ್ಕೆ ಪಾಣಿಗ್ರಹಣವೆಂದು ಹೇಳುತ್ತಾರೆ. ಲಾಜಾ ಎಂದರೆ ಅರಳು. ವರನು ತನ್ನ ಎರಡೂ ಕೈಗಳಿಂದ ವಧುವಿನ ಬೊಗಸೆಯನ್ನು ಹಿಡಿದು ಅದರಲ್ಲಿರುವ ಅರಳನ್ನು ಹೋಮದಲ್ಲಿ ಅರ್ಪಿಸುತ್ತಾನೆ. ನಂತರ ತನ್ನ ಹಿಂದಿನಿಂದ ವಧುವಿನ ಕೈ ಹಿಡಿದುಕೊಂಡು ಹೋಮಪಾತ್ರೆ, ಉದಕಕುಂಭ ಮತ್ತು ಅಗ್ನಿ ಇವುಗಳಿಗೆ ಪ್ರದಕ್ಷಿಣೆ ಹಾಕುತ್ತಾನೆ. 
  ಸಪ್ತಪದಿ
ಇಬ್ಬರೂ ಜೊತೆಗೂಡಿ ಏಳು ಹೆಜ್ಜೆಗಳನ್ನು ಇಡುವುದರಿಂದ ಸ್ನೇಹ ಬೆಳೆಯುತ್ತದೆ, ಎಂದು ಶಾಸ್ತ್ರವಚನವಿದೆ. ವರನು ವಧುವಿನ ಕೈ ಹಿಡಿದು ಹೋಮದ ಉತ್ತರ ದಿಕ್ಕಿಗೆ ಸ್ಥಾಪಿಸಿರುವ ಅಕ್ಕಿಯ ಏಳು ರಾಶಿಗಳ ಮೇಲಿಂದ ಅವಳನ್ನು ನಡೆಸುತ್ತಾನೆ, ಈ ಕೃತಿಗೆ ಸಪ್ತಪದಿಯೆಂದು ಹೇಳುತ್ತಾರೆ.(ಆಧಾರ: ಸನಾತನದ ಗ್ರಂಥ – ಹದಿನಾರು ಸಂಸ್ಕಾರ)