Friday 27 January 2012

ಮಾಂಗಲ್ಯಧಾರಣೆ

ಇದನ್ನು ಸಂಸ್ಕೃತದಲ್ಲಿ ಮಾಂಗಲ್ಯತಂತು ಎಂದೂ ಹೇಳು ತ್ತಾರೆ. ಇದರಲ್ಲಿ ಎರಡು ಎಳೆಗಳುಳ್ಳ ದಾರದಲ್ಲಿ ಕಪ್ಪು ಮಣಿಗಳನ್ನು ಪೋಣಿಸಿರುತ್ತಾರೆ. ಮಧ್ಯಭಾಗದಲ್ಲಿ ನಾಲ್ಕು ಚಿಕ್ಕ ಮಣಿಗಳು ಹಾಗೂ ೨ ಚಿಕ್ಕ ಬಟ್ಟಲುಗಳಿರುತ್ತವೆ. ಎರಡು ದಾರಗಳೆಂದರೆ ಪತಿ-ಪತ್ನಿಯರ ಬಂಧನ, ೨ ಬಟ್ಟಲುಗಳೆಂದರೆ ಪತಿ-ಪತ್ನಿ ಮತ್ತು ನಾಲ್ಕು ಕಪ್ಪು ಮಣಿ ಗಳೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಾಗಿವೆ. ವರನ ಪಕ್ಷದ ಸುಮಂಗಲಿಯರು ವಧು-ವರರನ್ನು ಪೂರ್ವಾಭಿಮುಖವಾಗಿ ಕುಳ್ಳಿರಿಸಬೇಕು. ವಧುವಿಗೆ ಅಷ್ಟಪುತ್ರಿ ಎನ್ನುವ ಹೆಸರಿನ ಎರಡು ಹಳದಿ ಬಣ್ಣದ ವಸ್ತ್ರಗಳನ್ನು ಮತ್ತು ರವಿಕೆ ಹಾಗೂ ಕಪ್ಪು ಮಣಿಗಳ ಮಾಂಗಲ್ಯವನ್ನು ಕೊಡಬೇಕು. ಅಷ್ಟಪುತ್ರಿಗಳ ಪೈಕಿ ಒಂದನ್ನು ಉಟ್ಟುಕೊಂಡು, ಒಂದನ್ನು ಅಂಗವಸ್ತ್ರವೆಂದು ಹೊದ್ದುಕೊಳ್ಳಬೇಕು. ರವಿಕೆ ಯನ್ನು ಹಾಕಿಕೊಳ್ಳಬೇಕು. ನಂತರ ವರನು ಮಾಂಗಲ್ಯವನ್ನು ಕನ್ಯೆಯ ಕೊರಳಿಗೆ ಕಟ್ಟಬೇಕು. ಭಾವಾರ್ಥ: ‘ಹಿಂದೂ ಧರ್ಮದಲ್ಲಿ ಪತಿಯು ಪತ್ನಿಗೆ ‘ಮಂಗಲಸೂತ್ರವನ್ನು ಕಟ್ಟುವುದು’ ಎಂದರೆ, ಅವರು ಪರಸ್ಪರರನ್ನು ಸಾಧನೆಯ ಬಂಧನದಲ್ಲಿ ಸಿಲುಕಿಸುವುದು. ‘ಶಿವ’ ಮತ್ತು ‘ಶಕ್ತಿ’ ಒಟ್ಟಿಗೆ ಸಮಾಜದಲ್ಲಿ ಸೇರಿ ಧರ್ಮಕಾರ್ಯ ಮಾಡುವುದು ಇದರ ಭಾವಾರ್ಥ ವಾಗಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಿಷಯವನ್ನು ಸಮಷ್ಟಿ ಕಾರ್ಯದ ಮಹತ್ವವನ್ನು ಅರಿತುಕೊಂಡೇ ಹೇಳಲಾಗಿದೆ.

No comments:

Post a Comment