Friday 27 January 2012

ವಿವಾಹ ಸಮಾರಂಭದ ಮೂಲಕ ಧರ್ಮಪ್ರಸಾರ

ಮದುವೆ ಸಮಾರಂಭದ ನಿಮಿತ್ತ ಆಪ್ತೇಷ್ಟರು, ಸ್ನೇಹಿತರ ಬಳಗ ಹೀಗೆ ಅನೇಕರೊಂದಿಗೆ ಹತ್ತಿರದ ಸಂಬಂಧ ಬರುತ್ತದೆ. ಮದುವೆ ಸಮಾರಂಭದ ಮಾಧ್ಯಮದಿಂದ ಧರ್ಮಪ್ರಸಾರ ಮಾಡಿದರೆ ಆಪ್ತೇಷ್ಟರು ಧರ್ಮಶಿಕ್ಷಿತರಾಗುವರು ಮತ್ತು ಸಾಧನೆ ಮಾಡಿ ಈಶ್ವರನೆಡೆಗೆ ಅಂದರೆ ಶಾಶ್ವತ ಆನಂದದ ಕಡೆಗೆ ಮಾರ್ಗಕ್ರಮಣ ಮಾಡುವರು. ಮದುವೆ ಸಮಾರಂಭದ ಮೂಲಕ ಧರ್ಮಪ್ರಸಾರ ಹೇಗೆ ಮಾಡಬಹುದು, ಎಂಬುದನ್ನು ತಾವು ಈ ಲೇಖನಮಾಲಿಕೆಯಿಂದ ತಿಳಿದುಕೊಳ್ಳುವವರಿದ್ದೀರಿ. ಕಳೆದ ವಾರದ ಲೇಖನದಿಂದ ವಿವಾಹ ಪತ್ರಿಕೆಯ ಬಗ್ಗೆ ತಿಳಿದುಕೊಂಡೆವು. ಈ ಲೇಖನದಿಂದ ನಾವು ಅಕ್ಷತೆ, ಮಂಗಳಸೂತ್ರ ಮತ್ತು ಪೂಜಾವಿಧಿ ಈ ವಿಷಯಗಳನ್ನು ತಿಳಿದುಕೊಳ್ಳೋಣ.

ವಿವಾಹ ಪತ್ರಿಕೆಯಲ್ಲಿ ಮುದ್ರಿಸಲು ವಿವಾಹ  ವಿಧಿ
 
 
ಮದುವೆಯಲ್ಲಿ ಅಕ್ಷತೆ ಉಪಯೋಗಿಸುವ ಕಾರಣ
ಮದುವೆಯಲ್ಲಿ ಅಕ್ಷತೆಯನ್ನು ವಧು- ವರರ ತಲೆಯ ಮೇಲೆ ಹಾಕುವುದು ದೇವತೆಗಳ ಕೃಪಾಧಾರೆಯ ಪ್ರತೀಕ ವಾಗಿದೆ. ಮದುವೆ ವಿಧಿಯಲ್ಲಿ ಉಪ ಯೋಗಿಸುವ ಅಕ್ಷತೆಗೆ ಕುಂಕುಮ ಹಚ್ಚಿರು ತ್ತಾರೆ. ಕೆಂಪು ಕುಂಕುಮದ ಕಡೆಗೆ ಬ್ರಹ್ಮಾಂಡ ದಲ್ಲಿನ ಆದಿಶಕ್ತಿಯ ತತ್ತ್ವ ಆಕರ್ಷಿತವಾಗು ತ್ತದೆ. ಆದಿಶಕ್ತಿಯ ತತ್ತ್ವವು ಆಕರ್ಷಿತವಾಗಿ ರುವ ಅಕ್ಷತೆಯನ್ನು ವಧು-ವರರ ತಲೆಯ ಮೇಲೆ ಹಾಕುವುದರಿಂದ ವಧು-ವರ ರಲ್ಲಿನ ದೈವತ್ವ ಜಾಗೃತವಾಗಿ ಅವರಲ್ಲಿ ಸಾತ್ತ್ವಿಕತೆ ಹೆಚ್ಚಾಗಿ ಸಹಜವಾಗಿ ಮದುವೆಯ ವಿಧಿಯ ಸ್ಥಳದಲ್ಲಿ ಬಂದಿರುವ ದೇವ- ದೇವತೆಗಳ ಲಹರಿಗಳನ್ನು ಆಕರ್ಷಿಸುವ ಅವರ ಕ್ಷಮತೆ ಹೆಚ್ಚಾಗುತ್ತದೆ. ಅದರಿಂದ ಇಂತಹ ದೇವ-ದೇವತೆಗಳು ಉಪಸ್ಥಿತ ರಿರುವ ಈ ಸಮಾರಂಭದಿಂದ ವಧು- ವರರಿಗೆ ಲಾಭ ದೊರೆಯುತ್ತದೆ.
 
ಮಂಗಳಸೂತ್ರದಲ್ಲಿನ ಕಪ್ಪು ಮಣಿ ಮತ್ತು ಬಟ್ಟಲು ಇವುಗಳ ಆಧ್ಯಾತ್ಮಿಕ ಅರ್ಥ
ಮಂಗಳಸೂತ್ರದ ಎರಡು ಬಟ್ಟಲು ಗಳಲ್ಲಿ ಒಂದು ಬಟ್ಟಲು ಶಿವನದಾದರೆ ಇನ್ನೊಂದು ಬಟ್ಟಲು ಶಕ್ತಿಯ ಪ್ರತೀಕ ವಾಗಿದೆ. ಶಿವ-ಶಕ್ತಿಯ ಬಲದ ಮೇಲೆ ವಧುವಿಗೆ ಮಾವನ ಮನೆಯವರ ರಕ್ಷಣೆ ಮತ್ತು ಅವರನ್ನು ಕಾಪಾಡುವುದಿ ರುತ್ತದೆ. ಈ ಎರಡು ಬಟ್ಟಲನ್ನು ಜೋಡಿಸುವ ತಂತಿಯು ತವರು ಮನೆಯ ಕುಲದೇವತೆಯ ಉಪಾಸನೆ ಬಿಟ್ಟು ಈಗ ಮಾವನ ಮನೆಯ ಕುಲದೇವಿಯ ಉಪಾಸನೆ ಮಾಡಲು ಹಿಂದೂ ಧರ್ಮವು ನೀಡಿದ ಅನುಮತಿಯಲ್ಲಿನ ಕೊಡು-ಕೊಳ್ಳುವುದರ ದರ್ಶಕವಾಗಿದೆ. ತವರುಮನೆಯ ಬಟ್ಟಲಿನಲ್ಲಿ ಅರಶಿಣವಾದರೆ ಮಾವನ ಮನೆಯ ಬಟ್ಟಲಿನಲ್ಲಿ ಕುಂಕುಮ ತುಂಬಿ, ಕುಲದೇವಿಯನ್ನು ಸ್ಮರಿಸಿ ಮಂಗಳಸೂತ್ರದ ಪೂಜೆ ಮಾಡಿ ಅನಂತರವೇ ಅದನ್ನು ಕುತ್ತಿಗೆಗೆ ಕಟ್ಟಲಾಗುತ್ತದೆ.
ಪೂಜಾವಿಧಿ ಮಾಡುವಾಗ ಪತ್ನಿಯು ಪತಿಯ ಬಲಬದಿಗೆ ಏಕೆ ಕುಳಿತುಕೊಳ್ಳಬೇಕು?
ಪತ್ನಿಗೆ ಗಂಡನ ಅರ್ಧಾಂಗಿನಿ ಅಂದರೆ ಬಲನಾಡಿ ಎಂದು ತಿಳಿದುಕೊಳ್ಳುತ್ತಾರೆ. ಶಿವನ ಶಕ್ತಿಯೆಂದು ಪತ್ನಿಯು ಪತಿಯ ಬಲಬದಿಗೆ ಇದ್ದು ಅವನಿಗೆ ಪ್ರತಿಯೊಂದು ಕರ್ಮದಲ್ಲಿಯೂ ಸಹಕಾರ ಮಾಡುವುದಿರುತ್ತದೆ. ಪ್ರತಿ ಯೊಂದು ಪೂಜಾವಿಧಿಯಲ್ಲಿ ಪತ್ನಿ ಕೇವಲ ಪತಿಯ ಬಲ ಕೈಗೆ ತನ್ನ ನಾಲ್ಕು ಬೆರಳು ಗಳನ್ನು ಸ್ಪರ್ಶಿಸಿ ಅವನಿಗೆ ಪೂಜಾವಿಧಿಯಲ್ಲಿ ಬೇಕಾದ ಶ್ರೀ ದುರ್ಗಾದೇವಿಯ ಶಕ್ತಿಯನ್ನು ಪೂರೈಸುತ್ತಾಳೆ. ಆದುದರಿಂದ ಯಜಮಾನ ಮತ್ತು ಅವನ ಪತ್ನಿ ಇವರು ಮಾಡಿದ ಕರ್ಮಕ್ಕೆ ಶಿವ-ಶಕ್ತಿಯ ಸಹಾಯ ದೊರೆತು ಕಡಿಮೆ ಕಾಲಾವಧಿಯಲ್ಲಿ ಫಲ ಪ್ರಾಪ್ತಿಯಾಗುತ್ತದೆ. ಕೇವಲ ಯಜ್ಞಕರ್ಮ ದಲ್ಲಿ ಪತ್ನಿಯು ಯಜಮಾನನ ಎಡಬದಿಗೆ ಕುಳಿತುಕೊಳ್ಳಬೇಕು. (ಹೆಚ್ಚಿನ ಮಾಹಿತಿಗಾಗಿ ಓದಿ - ಸನಾತನದ ಗ್ರಂಥಮಾಲಿಕೆ ‘ಧರ್ಮಶಾಸ್ತ್ರ ಹೀಗೇಕೆ ಹೇಳುತ್ತದೆ’?)
 ವಿವಾಹಪತ್ರಿಕೆ ಸಾತ್ತ್ವಿಕವಾಗಲು ಏನು ಮಾಡಬೇಕು?
ವಿವಾಹಪತ್ರಿಕೆಯು ಸದ್ಯ ಪ್ರತಿಷ್ಠೆಯ ವಿಷಯವಾಗಿದೆ. ಅನೇಕ ಪುಟಗಳ, ಸುಗಂಧಭರಿತ, ದುಬಾರಿ ಮದುವೆಯ ಪತ್ರಿಕೆ ಮುದ್ರಿಸಲು ಸಮಾಜವು ಪ್ರಯತ್ನಿಸು ತ್ತಿದೆ. ‘ವಿವಾಹ’ವು ಧಾರ್ಮಿಕ ವಿಧಿಯಾಗಿ ರುವುದರಿಂದ ವಿವಾಹಪತ್ರಿಕೆಗಳು ಸಾತ್ತ್ವಿಕ ವಾಗಿರಬೇಕು ಮತ್ತು ಅದರ ಮೂಲಕ ಧರ್ಮಪ್ರಸಾರವಾಗಬೇಕು ಎಂಬುದಕ್ಕಾಗಿ ಪ್ರಯತ್ನಿಸಬೇಕು. ಈ ದೃಷ್ಟಿಯಿಂದ ವಿವಾಹ ಪತ್ರಿಕೆಯಲ್ಲಿನ ವಿವಿಧ ಘಟಕ ಹೇಗಿರ ಬೇಕು, ಎಂಬುದನ್ನು ಮುಂದೆ ನೀಡಲಾಗಿದೆ.
ಸಾತ್ತ್ವಿಕ ಚಿತ್ರಗಳು ಮತ್ತು ಕಲಾಕುಸುರಿ
ಪತ್ರಿಕೆಯಲ್ಲಿ ದೇವತೆಗಳ ವಿಡಂಬನಾತ್ಮಕ ಚಿತ್ರಗಳನ್ನು (ಉದಾ. ಶ್ರೀ ಗಣೇಶನ ಕೇವಲ ಮುಖವಿರುವ, ಎಲೆಯಲ್ಲಿ ಬಿಡಿಸಿದ, ಪೇಠಾ ಕಟ್ಟಿದ ಇತ್ಯಾದಿ) ಮುದ್ರಿಸಬೇಡಿ. ದೇವತೆ ಗಳ ಸಾತ್ತ್ವಿಕ ಚಿತ್ರಗಳನ್ನು (ಉದಾ. ಮೂರ್ತಿ ಶಾಸ್ತ್ರಕ್ಕನುಸಾರ ತಯಾರಿಸಿದ ಪೂರ್ಣಾಕೃತಿ ಶ್ರೀ ಗಣೇಶಮೂರ್ತಿ) ಉಪಯೋಗಿಸಿ. ಪತ್ರಿಕೆಯಲ್ಲಿ ಲೇಖನ ಸಂರಚನೆ ಮಾಡು ವಾಗ ಶುಭಚಿಹ್ನೆಯನ್ನು (ಉದಾ. ಸ್ವಸ್ತಿಕ, ಓಂ, ಕಲಶ, ಕಮಲ) ಉಪಯೋಗಿಸಿ.
ಲೇಖನ
ಪತ್ರಿಕೆಯಲ್ಲಿನ ಲೇಖನವನ್ನು ಮಾತೃ ಭಾಷೆಯಲ್ಲಿ ಪ್ರಕಟಿಸಿರಿ. ಮಾತೃಭಾಷೆ ಯಲ್ಲಿನ ಲೇಖನವು ಎಲ್ಲ ಆಪ್ತೇಷ್ಟರಿಗೆ ತಿಳಿಯದಿದ್ದರೆ ಅದನ್ನು ರಾಷ್ಟ್ರೀಯ ಭಾಷೆ ಯಲ್ಲಿ ಪ್ರಕಟಿಸಿ; ಆದರೆ ಅದನ್ನು ಆಂಗ್ಲ ದಿಂದ ಪ್ರಕಟಿಸಬೇಡಿ. ಪತ್ರಿಕೆಯಲ್ಲಿನ ಲೇಖನದ ವ್ಯಾಕರಣ ಶುದ್ಧವಾಗಿರಬೇಕು ಹಾಗೂ ಲೇಖನದಲ್ಲಿ ವಿದೇಶಿಭಾಷೆಯ ಶಬ್ದಗಳನ್ನು ಉಪಯೋಗಿಸಬೇಡಿ. ಅಕ್ಷರ ಗಳು ವರ್ತುಲಾಕಾರ ಮತ್ತು ಎದ್ದು ಕಾಣು ವಷ್ಟು ಸ್ಪಷ್ಟವಾಗಿರಬೇಕು; ಆದರೆ ಅಕ್ಷರ ಗಳು ಮಸುಕಾಗಿರಬಾರದು. ಅಕ್ಷರಗಳನ್ನು ಡೊಂಕಾಗಿ ಬರೆಯಬಾರದು. ಆಮಂತ್ರಣದ ವಿಷಯ ಸಾಮಾನ್ಯವಾಗಿ ಗುರು ಮತ್ತು ಈಶ್ವರನ ಬಗ್ಗೆ ಭಾವ ವ್ಯಕ್ತವಾಗುವಂತಿರ ಬೇಕು, ಉದಾ. ‘ನಮ್ಮ ಕುಲದೇವತೆ ಶ್ರೀ ಭವಾನಿದೇವಿಯ ಕೃಪೆಯಿಂದ .....’, ‘ಶ್ರೀ ಗುರು ಪ.ಪೂ.ಭಕ್ತರಾಜ ಮಹಾರಾಜರ ಕೃಪೆಯಿಂದ.....’ ಹೀಗೆ ಆಮಂತ್ರಣವನ್ನು ಪ್ರಾರಂಭಿಸಬೇಕು.

No comments:

Post a Comment