Friday 27 January 2012

ವಿವಾಹ ವಿಧಿ

ವಿವಾಹ ಪತ್ರಿಕೆಯಲ್ಲಿ ಮುದ್ರಿಸಲು ವಿವಾಹ ವಿಧಿಯ ವಿಷಯದಲ್ಲಿ ಧರ್ಮಶಿಕ್ಷಣ ನೀಡುವ ಲೇಖನ
                            ಮಂಟಪದೇವತೆ ಪ್ರತಿಷ್ಠಾಪನೆ
ವಿವಾಹ, ಉಪನಯನ ಇತ್ಯಾದಿ ಸಂಸ್ಕಾರಗಳ ಆರಂಭದಲ್ಲಿ ಈ ಸಂಸ್ಕಾರವನ್ನು ನಿರ್ವಿಘ್ನವಾಗಿ ಪೂರ್ಣಗೊಳಿಸಬೇಕೆನ್ನುವ ಉದ್ದೇಶದಿಂದ ಮಂಟಪದೇವತೆ ಮತ್ತು ಅವಿಘ್ನಗಣಪತಿಯ ಪ್ರತಿಷ್ಠಾಪನೆ ಮಾಡುವ ಪದ್ಧತಿಯಿದೆ; ಇದಕ್ಕೆ ದೇವರನ್ನು ಕೂಡಿಸುವುದು  ಎಂದು ಹೇಳುತ್ತಾರೆ. 
 ಮಂಗಲಾಷ್ಟಕ ಮತ್ತು ಅಕ್ಷತಾರೋಪಣ ವಿಧಿ


ಮಂಗಲಾಷ್ಟಕ ಪೂರ್ಣವಾದ ನಂತರ ಅಂತರಪಟ ಉತ್ತರ ದಿಕ್ಕಿನಿಂದ ತೆಗೆಯಬೇಕು. ಅನಂತರ ವಧು-ವರರು ಕೈಯಲ್ಲಿರುವ ಅಕ್ಷತೆ, ಬೆಲ್ಲ, ಜೀರಿಗೆ ಇತ್ಯಾದಿಗಳನ್ನು ಪರಸ್ಪರರ ತಲೆಯ ಮೇಲೆ ಹಾಕುತ್ತಾರೆ. ಮೊದಲು ವಧು ವರನಿಗೆ ಮತ್ತು ನಂತರ ವರ ವಧುವಿಗೆ ಮಾಲೆ ಹಾಕುತ್ತಾರೆ.
ಕನ್ಯಾದಾನ
ವಧುವನ್ನು ವರನಿಗೆ ದಾನ ನೀಡುವುದಕ್ಕೆ ಕನ್ಯಾದಾನ ಎಂದು ಹೇಳುತ್ತಾರೆ. ‘ಈ ಕನ್ಯೆಯು ಬ್ರಹ್ಮಲೋಕವನ್ನು ಪ್ರಾಪ್ತಿ ಮಾಡಿಕೊಳ್ಳ ಬೇಕೆಂಬ ಇಚ್ಛೆಯಿಂದ ನೀವು ವಿಷ್ಣುವೆಂದು ತಿಳಿದು ನೀಡುತ್ತಿ ದ್ದೇನೆ’, ಎಂದು ವಧುವಿನ ತಂದೆ ಹೇಳುತ್ತಾರೆ.
 


 ಮಂಗಳಸೂತ್ರ ಬಂಧನ
ಮಂಗಳಸೂತ್ರದಲ್ಲಿ ಎರಡೆಳೆ ದಾರದಲ್ಲಿ ಕಪ್ಪು ಮಣಿಗಳನ್ನು ಪೋಣಿಸಿರಲಾಗುತ್ತವೆ. ಮಧ್ಯದಲ್ಲಿ ೪ ಚಿಕ್ಕ ಮಣಿಗಳು ಮತ್ತು ೨ ಸಣ್ಣ ತಾಳಿ(ಬಟ್ಟಲು)ಗಳಿರುತ್ತವೆ. ಎರಡು ದಾರಗಳು ಅಂದರೆ ಪತಿ-ಪತ್ನಿಯರ ಬಂಧನ, ಎರಡು ಬಟ್ಟಲುಗಳೆಂದರೆ ಪತಿ-ಪತ್ನಿ ಹಾಗೂ ೪ಕಪ್ಪು ಮಣಿಗಳೆಂದರೆ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳು. 

 ವಿವಾಹ ಹೋಮ
ವಧುವಿನಲ್ಲಿ ಭಾರ್ಯತ್ವ ಸಿದ್ಧವಾಗಲು ಮತ್ತು ಗೃಹ್ಯಾಗ್ನಿಯು ಸಿದ್ಧವಾಗಲು ವಿವಾಹಹೋಮ ಮಾಡುತ್ತಾರೆ. 
 ಪಾಣಿಗ್ರಹಣ ಮತ್ತು ಲಾಜಾಹೋಮ
ವರನು ತನ್ನ ಐದು ಬೆರಳುಗಳ ಸಹಿತ ವಧುವಿನ ಅಂಗೈಯನ್ನು ತನ್ನ ಕೈಯಲ್ಲಿ ಹಿಡಿಯುವುದು, ಇದಕ್ಕೆ ಪಾಣಿಗ್ರಹಣವೆಂದು ಹೇಳುತ್ತಾರೆ. ಲಾಜಾ ಎಂದರೆ ಅರಳು. ವರನು ತನ್ನ ಎರಡೂ ಕೈಗಳಿಂದ ವಧುವಿನ ಬೊಗಸೆಯನ್ನು ಹಿಡಿದು ಅದರಲ್ಲಿರುವ ಅರಳನ್ನು ಹೋಮದಲ್ಲಿ ಅರ್ಪಿಸುತ್ತಾನೆ. ನಂತರ ತನ್ನ ಹಿಂದಿನಿಂದ ವಧುವಿನ ಕೈ ಹಿಡಿದುಕೊಂಡು ಹೋಮಪಾತ್ರೆ, ಉದಕಕುಂಭ ಮತ್ತು ಅಗ್ನಿ ಇವುಗಳಿಗೆ ಪ್ರದಕ್ಷಿಣೆ ಹಾಕುತ್ತಾನೆ. 
  ಸಪ್ತಪದಿ
ಇಬ್ಬರೂ ಜೊತೆಗೂಡಿ ಏಳು ಹೆಜ್ಜೆಗಳನ್ನು ಇಡುವುದರಿಂದ ಸ್ನೇಹ ಬೆಳೆಯುತ್ತದೆ, ಎಂದು ಶಾಸ್ತ್ರವಚನವಿದೆ. ವರನು ವಧುವಿನ ಕೈ ಹಿಡಿದು ಹೋಮದ ಉತ್ತರ ದಿಕ್ಕಿಗೆ ಸ್ಥಾಪಿಸಿರುವ ಅಕ್ಕಿಯ ಏಳು ರಾಶಿಗಳ ಮೇಲಿಂದ ಅವಳನ್ನು ನಡೆಸುತ್ತಾನೆ, ಈ ಕೃತಿಗೆ ಸಪ್ತಪದಿಯೆಂದು ಹೇಳುತ್ತಾರೆ.(ಆಧಾರ: ಸನಾತನದ ಗ್ರಂಥ – ಹದಿನಾರು ಸಂಸ್ಕಾರ)

1 comment:

  1. Chandru u have just created a very nice blog!

    very good information abt marriage..

    Keep up the good work!

    ReplyDelete